ಸರಕಾರಿ ಪ್ರೌಢಶಾಲೆ ಮುಲ್ಕಿಯಲ್ಲಿ ಶಾಲಾ ಸಂಸತ್ತು ಚುನಾವಣೆ 2024-25

ಸರಕಾರಿ ಪ್ರೌಢಶಾಲೆ ಮುಲ್ಕಿಯ 2024-25ನೇ ಸಾಲಿನ ಶಾಲಾ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಚುನಾವಣೆ ನಡೆಯಿತು. ಉಮೇದುದಾರ ವಿದ್ಯಾರ್ಥಿಗಳು ನಾಮಪತ್ರವನ್ನು ಮುಖ್ಯೋಪಾಧ್ಯಾಯರಿಗೆ ಸಲ್ಲಿಸಿ, ಪ್ರತೀ ತರಗತಿಗೆ ಹೋಗಿ ಪ್ರಚಾರ ನಡೆಸಿದರು. ಶಾಲೆಯ ಪ್ರತಿಯೊಂದು ವಿದ್ಯಾರ್ಥಿಯೂ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ನೆಟ್ಟಿನ ನಾಯಕ/ಕಿಗೆ ಮತದಾನ ಮಾಡಿದರು.