ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಯೋಗ ದಿನಾಚರಣೆ ಜೂನ್ 21ರಂದು ನಡೆಯಿತು.
ಯೋಗ ಗುರು ವಿನೋದ್ ಬಜ್ಪೆಯವರಿಂದ ಯೋಗಾಸನಗಳ ಮಹತ್ವ ಮತ್ತು ವಿವಿಧ ಯೋಗಗಳನ್ನು ವಿದ್ಯಾರ್ಥಿಗಳಿಗೆ ತರಬೇತಿಗೊಳಿಸಿದರು. ಕಾಲೇಜಿನ ಪ್ರಾಂಜುಪಾಲರಾದ ವಾಸುದೇವ ಬೆಳ್ಳೆ, ಪ್ರೌಢಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮಿ ನಾಯಕ, ಹಳೆ ವಿದ್ಯಾರ್ಥಿ ಸಂಘದ ಕೇಶವ ಸುವರ್ಣ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ರಮಾನಂದ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.